ಅಂಕೋಲಾ : 2023-24 ನೇ ಸಾಲಿನ ಸಾಲಿನ ಅಂಕೋಲಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ ಅಗಸೂರಿನ ಕೆ.ಪಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳು ವೀರಾಗ್ರಣಿ ಪ್ರಶಸ್ತಿ ತನ್ನದಾಗಿಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ನಂದಿನಿ ಎನ್. ಗೌಡ, 100 ಮೀ. ದ್ವಿತೀಯ, 200 ಮೀ. ದ್ವಿತೀಯ, ಉದ್ದಜಿಗಿತ ದ್ವಿತೀಯ. ಬೇಬಿ ಜಿ. ಗೌಡ 800 ಮೀ. ದ್ವಿತೀಯ, 100 ಮೀ. ತೃತೀಯ, ವಿದ್ಯಾಶ್ರೀ ಸಿ. ಗೌಡ ಎತ್ತರ ಜಿಗಿತದಲ್ಲಿ ಪ್ರಥಮ, ಪ್ರಮೋದ ಎನ್. ಗೌಡ 1500 ಮೀ. ದ್ವಿತೀಯ, 1500 ಮೀ. ಓಟ ಮಮತಾ ಬಿ. ಗೌಡ ತೃತ್ತೀಯ, 3000 ಮೀ. ಓಟ ಶ್ರೀಧರ ವಾಯ್. ಗೌಡ ದ್ವಿತೀಯ, 3000 ಮೀ. ಓಟ ಅಪೂರ್ವ ಎಸ್. ಗೌಡ ತೃತೀಯ, ಪ್ರವೀಣ ವಿ. ಗೌಡ ಚಕ್ರ ಎಸೆತದಲ್ಲಿ ದ್ವಿತೀಯ, ನಾಗನಂದ ಸಿ. ಗೌಡ ಜಾವಲಿನ್ ಎಸೆತದಲ್ಲಿ ದ್ವಿತೀಯ, ಹರೀಶ ಗೌಡ 3000 ಮೀ. ಓಟದಲ್ಲಿ ತೃತೀಯ, 1500 ಮೀ. ಸುಭಾಷ ಜಿ. ಗೌಡ ತೃತೀಯ, ಚೆಸ್ ಆಟದಲ್ಲಿ ನಿತೀಶ ಎಂ. ನಾಯ್ಕ ಪ್ರಥಮ, ಸುಮಂತ ಟಿ. ನಾಯ್ಕ ಪ್ರಥಮ, ಆದರ್ಶ ಎಸ್. ನಾಯ್ಕ ಪ್ರಥಮ, ಗಣಪತಿ ಎಸ್. ಗುನಗಾ ಪ್ರಥಮ, ಹುಡುಗರ ವಾಲಿಬಾಲ್ ಪ್ರಥಮ, ಹುಡುಗಿಯರ ಖೋ ಖೋ ಪ್ರಥಮ, ಹುಡುಗಿಯರ 4×100 ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಕ ರಾಜೇಂದ್ರ ಕೇಣಿ ಅವರಿಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಸಕ ಆದ ಸತೀಶ ಸೈಲ್ ಹಾಗೂ ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ರಾಮದಾಸ ನಾಯಕ, ಅಗಸೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಾಲಚಂದ್ರ ಆರ್. ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷಿö್ಮÃ ಪಾಟೀಲ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಕೆ.ಪಿ.ಎಸ್. ಅಗಸೂರಿನ ಪ್ರಾಂಶುಪಾಲ ಆಯ್.ಬಿ.ಪೂಜಾರಿ, ಪ್ರೌಢಶಾಲಾ ಮುಖ್ಯಾಧ್ಯಾಪಕ ವಿ.ಆರ್.ನಾಯಕ ಮತ್ತು ಶಿಕ್ಷಕವೃಂದ ಹಾಗೂ ಅಗಸೂರಿನ ಊರ ನಾಗರಿಕರು ಅಭಿನಂದಿಸಿದ್ದಾರೆ.
