ರಾಘು ಕಾಕರಮಠ.

ಅಂಕೋಲಾ : ಅಂಬುಲೆನ್ಸ್ನಲ್ಲಿಯೆ ತಾಯಿ ಮಗುವಿಗೆ ಜನ್ಮ ನೀಡಿದ ಘಟನೆ ಕೂತುಹಲಕಾರಿ ತಿರುವು ಪಡೆದುಕೊಂಡಿದೆ. ಮಹಿಳೆ ಗರ್ಭಿಣಿ ಇರುವ ವಿಷಯವೆ ಆ ಭಾಗದ ಶೂಶ್ರಷಕಿ ಮತ್ತು ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಕಿಚ್ಚಿತ್ತು ಮಾಹಿತಿ ಇರದೆ ಇರುವ ಬಗ್ಗೆ ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಸಂಬAದಪಟ್ಟ ಇಲಾಖೆಯ ಸಿಬ್ಬಂದಿಗಳು ವಿಚಾರಣೆಗೆ ಒಳಗಾಗುವಂತಾಗಿದೆ.

ತಾಲೂಕಾ ಆರೋಗ್ಯ ಅಧಿಕಾರಿ ಜಗಧೀಶ ನಾಯ್ಕ ಅವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಗರ್ಭಿಣಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸದೆ ಅಸಡ್ಡೆ ತೋರಿದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ಟೋಬರ್ 4 ರಂದು ಹೆರಿಗೆಗೆಂದು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಅಂಬುಲೆನ್ಸ್ನಲ್ಲಿಯೆ ತಾಯಿ ಮಗುವಿಗೆ ಜನ್ಮ ನೀಡಿದ ಘಟನೆ ತಾಲೂಕಿನ ಹೊನ್ನೆಬೈಲದಲ್ಲಿ ನಡೆದಿತ್ತು. ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಗಣೇಶ ನಾಯ್ಕ ಅವರು ಅಂಬುಲೆನ್ಸ್ನಲ್ಲಿಯೆ ಹೆರಿಗೆ ಮಾಡಿಸಿದ್ದರು.

 9 ತಿಂಗಳು ತುಂಬಿದರೂ ಗಮನಕ್ಕಿರಲಿಲ್ಲ:

ತಾಲೂಕಿನ ಹೊನ್ನೆಬೈಲ್ ಗ್ರಾಮದ ಮಹಿಳೆಯೊಬ್ಬರು ಎರಡನೆ ಮಗುವಿಗೆ ಗರ್ಭೀಣಿಯಾಗಿದ್ದರು. ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆ ಭೇಟಿ ಸೇವೆಯನ್ನು ವಾರವು ನಡೆಸಿ, ಗ್ರಾಮದ ಜನರಲ್ಲಿ ಆರೋಗ್ಯದಲ್ಲಾಗುವ ವೆತ್ಯಾಸ, ಗರ್ಭಿಯರ ಬಗ್ಗೆ ಕಾಲಕಾಲದ ಮಾಹಿತಿ, ಮಗುವಿನ ಆರೋಗ್ಯಯುತ ಬೆಳವಣಿಗೆ ಹಾಗೂ ಶಿಶು ಆರೈಕೆ ಮತ್ತು ಪೌಷ್ಠಿಕ ಆಹಾರದ ಪೂರೈಕೆಯ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.

 ಆದರೆ ಗರ್ಭಿಣಿಯಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕಾಳಜಿಯಾಗಲಿ, ತೂಕ ಹಾಗೂ ಪೌಷ್ಠಿಕ ಆಹಾರದ ಪೂರೈಕೆಯನ್ನು ಕೂಡ ಮಾಡಿಲ್ಲ. ಹೆರಿಗೆಕ್ಕಿಂತ ಕೇವಲ ಒಂದು ವಾರದ ಹಿಂದೆ ತಾಯಿ ಕಾರ್ಡ ನೀಡಿ ಕೈ ತೊಳೆದು ಕೊಳ್ಳುವ ಕೆಲಸ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾದೇವ ಗೌಡ ಆರೋಪಿಸಿದ್ದಾರೆ.

 ಇನ್ನು ಗರ್ಭಿಣಿ ಆದ ಮೇಲೆ ಕನಿಷ್ಠ 3-4 ಭಾರಿ ಸ್ಕಾನಿಂಗ್ ಮಾಡಿ ಮಗುವಿನ ಚಲನವಲನ ಹಾಗೂ ಬೆಳವಣಿಗೆ ಆರೋಗ್ಯದ ತಪಾಸಣೆ ಮಾಡುವದು ಸಹಜ. ಆದರೆ ಕಲಾವತಿ ಗರ್ಭಿಣಿ ಆದಾಗಿನಿಂದ ಒಂದೇ ಒಂದು ಬಾರಿಯು ಸ್ಕಾನಿಂಗ್ ಮಾಡಲಾಗಿಲ್ಲ. ಹಾಗೆ ಹುಟ್ಟಿದ ಮಗುವಿನ ತೂಕ ಕೂಡ ಕಡಿಮೆ ಇದೆ ಎಂದು ಗೊತ್ತಾಗಿದೆ ಹೀಗಾಗಿ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ ಇಲ್ಲಿ ಎದ್ದು ಕಾಣುವಂತಾಗಿದೆ ಎಂದು ಆರೋಪಿಸಲಾಗಿದೆ.

 ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಇನ್ನು ಮುಂದೆ ಇತಂಹ ಪ್ರಕರಣಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ.

ಜಗಧೀಶ ನಾಯ್ಕ.
ಟಿ.ಎಚ್.ಓ. ಅಂಕೋಲಾ.

ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬ ತಾಯಿ ಮಗುವಿಗೂ ಸಮರ್ಪಕ ಚಿಕಿತ್ಸೆ ನೀಡಿಸುವಲ್ಲಿ ಕಟಿ ಬದ್ದನಾಗಿದ್ದೇನೆ. ಈ ಬಗ್ಗೆ ಎಇಎಚ್‌ಓ ಅವರಿಗೆ ಸೂಚನೆ ನೀಡಿದ್ದೇನೆ.

 ಸತೀಶ ಸೈಲ.(ಶಾಸಕರು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ.)