ರಾಘು ಕಾಕರಮಠ.
ಅಂಕೋಲಾ : ಮದುವೆಯ ಸಂಭ್ರಮಕ್ಕಾಗಿ ಕೈಗೆ ಹಚ್ಚಿದ ಮೆಹೆಂದಿಯ ಬಣ್ಣ ಮಾಸುವ ಮುನ್ನವೆ ವಿಚ್ಛೇಧನದ ದಾರಿ ತುಳಿಯುತ್ತಿರುವ ಪ್ರಕರಣಗಳು ಅಂಕೋಲಾದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ವಿದ್ಯಮಾನ ಕಳವಳವನ್ನು ತಂದಿದೆ.
ಸುಂದರ ಕನಸುಗಳನ್ನು ಹೊತ್ತು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಯಾವುದೇ ಸಕಾರಣವಿಲ್ಲದೇ ಕೌಟುಂಬಿಕ ನ್ಯಾಯಾಲಯದಲ್ಲಿ ನಮ್ಮ ದಾಂಪತ್ಯಕ್ಕೆ ಕಾನೂನಿನಿಂದ ಮುಕ್ತಿ ಕೊಡಿ ಎಂದು ಮನವಿ ಮಾಡಿ ಪ್ರಕರಣಗಳು ದ್ವಿಶತಕ ದಾಟಿ ನಿಂತಿದೆ
ವರ್ಷಕ್ಕೆ ೩೫ ಕ್ಕೂ ಹೆಚ್ಚು ಪ್ರಕರಣ
ಅಂಕೋಲಾದ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತಿ ವರ್ಷ ೩೫ ಕ್ಕೂ ಅಧಿಕ ವಿವಾಹ ವಿಚ್ಛೇದನ ಅರ್ಜಿಗಳು ದಾಖಲಾಗುತ್ತವೆ. ದುರ್ಬಲಗೊಳ್ಳುತ್ತಿರುವ ಮದುವೆ ವ್ಯವಸ್ಥೆ, ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿ. ಆರ್ಥಿಕ ಭದ್ರತೆ. ವೇಗದ ಆಧುನಿಕ ಜೀವನ ಶೈಲಿ. ಕಾನೂನಿನ ದುರ್ಬಳಕೆ, ಸಾಮಾಜಿಕ ಜಾಲತಾಣಗಳ ಹಾವಳಿ, ಅನೈತಿಕ ಸಂಬAಧಗಳ ಕಾರಣಗಳಿಂದಾಗಿ ವಿಚ್ಛೇಧನದ ಕದ ತಟುವಂತಾಗಿದೆ.
ಸಕಾರಣವಿಲ್ಲದೇ ಹತ್ತಾರು ಪ್ರಕರಣಗಳು :
ಗಂಡ ದುಡಿದಿದ್ದು ಎಲ್ಲಾ ತನ್ನದಾಗಬೇಕು ಎಂಬ ಮನಸ್ಥಿತಿ. ಗಂಡನ ಮನೆಯವರಿಂದ ಬೇರ್ಪಟ್ಟು ಬೇರೆ ಮನೆ ಮಾಡಿಕೊಂಡು ಗಂಡನೊ0ದಿಗೆ ಸ್ವತಂತ್ರವಾಗಿರಬೇಕು ಎಂಬ ಬಯಕೆ. ಇದಕ್ಕೆ ಒಪ್ಪದ ಪತಿ. ನಿತ್ಯ ಇಬ್ಬರ ನಡುವೆ ಮನಸ್ತಾಪ. ಅಂತಿಮವಾಗಿ ಹೊಂದಾಣಿಕೆ ಆಗುತ್ತಿಲ್ಲ ಜಗಳ ಹಾಗೆ ಗಂಡ ನಾಪತ್ತೆಯಾಗಿ ಹಲವಾರು ವರ್ಷ ಕಳೆದು ಹೋಗಿದ್ದು ಎಂಬ ಕಾರಣ ನೀಡಿ. ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಬಾಗಿಲಿಗೆ ಬಂದಿವೆ.
ಇನ್ನು ಅನೈತಿಕ ಸಂಬAಧ, ತೀರದ ಹಣದ ದಾಹ. ಮದುವೆಯಾಗಿ ಕೆಲ ತಿಂಗಳು ಮಾತ್ರ ಜೀವನ. ಕಾನೂನು ದುರುಪಯೋಗ ಪಡಿಸಿಕೊಂಡು ಪತಿಯ ವಿರುದ್ಧ ಪ್ರಕರಣ ದಾಖಲು. ನಂತರ ವಿವಾಹ ವಿಚ್ಛೇದನ. ಜೀವನಾಂಶ ಬೇಡಿಕೆ. ಮರುಮದುವೆ ಪುನಃ ಅದೇ ರೀತಿಯ ಮನಸ್ಥಿತಿ. ವಿವಾಹ ವಿಚ್ಛೇದನ. ಮತ್ತೆ ಜೀವನಾಂಶಕ್ಕೆ ಬೇಡಿಕೆ ಹೀಗೆ ಸಕಾರಣವಿಲ್ಲದೇ ಪ್ರಕರಣ ದಾಖಲಾಗುತ್ತಿರುವದು ವಿಶೇಷವಾಗಿದೆ.
ಇನ್ನು ಒಂದು ವೇಳೆ ಅವರಿಗೆ ಮಕ್ಕಳಿದ್ದರೆ ಅವರ ಭವಿಷ್ಯದ ಬಗ್ಗೆ ಕೂಡ ಚಿಂತನೆ ಮಾಡುವಂಥ ಮನಸ್ಥಿತಿ ಅವರಲ್ಲಿ ಇರುವುದಿಲ್ಲ. ಸೇಡು, ಸ್ವತಂತ್ರದ ಬದುಕಿಗಾಗಿ ಹಾತೊರೆದು ವಿವಾಹ ಬಂಧನದ ಮುಕ್ತಿಗೆ ಹಾತೊರಿಯುವಂತಾಗಿದೆ.
ಸುಶಿಕ್ಷಿತರಲ್ಲೇ ಹೆಚ್ಚು
ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವವರು ಬಹುತೇಕ ಸುಶಿಕ್ಷಿತರೇ ಹೆಚ್ಚಾಗಿರುವದು ಗಮನಾರ್ಹವಾಗಿದೆ. ಇದಕ್ಕೆ ಅವರಲ್ಲಿರುವ ಸ್ವಚ್ಛಂದ ಹಾಗೂ ಸ್ವತಂತ್ರ‍್ಯದ ಜೀವನದ ಮನೋಭಾವ ಕಾರಣ. ಜೊತೆಗೆ ಒಬ್ಬರಿಗೊಬ್ಬರಲ್ಲಿನ ಆರ್ಥಿಕ ಭದ್ರತೆ ಹಾಗೂ ಕಾನೂನಿನ ದುರ್ಬಳಕೆ. ಇವುಗಳಿಂದಾಗಿ ವಿಚ್ಛೇಧನಕ್ಕೆ ನ್ಯಾಯಾಲಯಕ್ಕೆ ಎಡತಾಕುವಂತಾಗಿದೆ.
ಇನ್ನು ವಿಚ್ಛೇಧನಕ್ಕಾಗಿ ಪತ್ನಿ ಪ್ರಕರಣ ದಾಖಲಿಸಿದರೇ ಪತಿ ಏಳೆಂಟು ವರ್ಷಗಳಿಂದ ನಾಪತ್ತೆಯಾಗಿ, ನ್ಯಾಯಾಲಯಕ್ಕೆ ಹಾಜರಾಗದೇ ಇರುವ ಪ್ರಕರಣ ಸಾಕಷ್ಠಿದೆ. ಹಾಗೆ ಅಂಕೋಲಾದಲ್ಲಿ ವಿಚ್ಛೇಧನಕ್ಕೆ ಅರ್ಜಿ ದಾಖಲಿಸಿದಲ್ಲಿ ಸ್ಥಳೀಯವಾಗಿ ಮಜುಗರ ಎದುರಿಸಬೇಕಾದೀತು ಎಂಬ ಆತಂಕದಿAದ ನೆರೆಯ ಯಲ್ಲಾಪುರ, ಕುಮಟಾ, ಹೊನ್ನಾವರದ ಕೌಟುಂಬಿಕ ನ್ಯಾಯಾಲಯದಲ್ಲೂ ಪ್ರಕರಣಗಳು ದಾಖಲಾಗುತ್ತಿರುವದು ಬೆಳಕಿಗೆ ಬಂದಿದೆ.
ಮದುವೆ ಎನ್ನುವುದು ಮನಸ್ಸು ಹಾಗೂ ಭಾವನೆಗಳ ಸಮ್ಮಿಲನ. ಕೆಲವೊಮ್ಮೆ ಮನಸ್ತಾಪ ಆರಂಭವಾದರೆ ಕೊನೆಗೆ ಅದು ನ್ಯಾಯಾಲಯದ ಬಾಗಿಲಿಗೆ ಬಂದು ಬೀಳುತ್ತದೆ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ’ ಇತಂಹ ವಿದ್ಯಮಾನ ಸರಿಯಲ್ಲ. ಇತಂಹ ಪ್ರಕರಣಗಳಲ್ಲಿ ನಾವು ಆದಷ್ಟು ನಾವು ಹೊಂದಾಣಿಕೆ ಮಾಡಿಕೊಡುವದನ್ನೆ ನೋಡುತ್ತೇವೆ.
ನಾರಾಯಣ ನಾಯಕ. (ವಕೀಲರು.)
ವಿವಾಹ ವಿಚ್ಛೇದನ’ ಎನ್ನುವುದು ಇತ್ತೀಚಿನ ದಿನಗಳಲ್ಲಿ ತೀರ ಸಾಮಾನ್ಯವಾದ ಪರಿಕಲ್ಪನೆಯಾಗಿದೆ. ಕೆಲವೇ ದಶಕಗಳ ಹಿಂದೆ ‘ವಿಚ್ಛೇದನ’ ಎಂದರೆ ಬೆಚ್ಚಿಬೀಳುವ ಮನಃಸ್ಥಿತಿಯಿತ್ತು. ದಾಂಪತ್ಯದಲ್ಲಿ ಬಿರುಕು ಉಂಟಾದ ದಂಪತಿಗಳಿಗೆ ಸೂಕ್ತವಾಗಿ ಸಮಾಲೋಚನೆ ನಡೆಸಿ ಅವರಲ್ಲಿಯ ಬಿನ್ನಾಭಿಪ್ರಾಯ ತೆಗೆಸುವ ಕಾರ್ಯವಾಗಬೇಕಿದೆ. ಆದರೆ ಇದಕ್ಕೆ ದಂಪತಿಗಳು ಸ್ಪಂದಿಸದೇ ಇರುವದು ಕೂಡ ಶೋಚನೀಯ ಸಂಗತಿಯಾಗಿದೆ.
ಮಮತಾ ನಾಯ್ಕ. (ಆಪ್ತ ಸಮಾಲೋಚಕಿ ಸಾಂತ್ವನ ಕೇಂದ್ರ.)