ಅಂಕೋಲಾ : ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ವ್ಯಕ್ತಿಯೊಬ್ಬ ಧಾಂದಲೆ ನಡೆಸಿ, ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ನಡೆಸಿರುವ ಘಟನೆ ಹಿಲ್ಲೂರಿನ ತಿಂಗಳಬೈಲನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಎದುರು ನಡೆದಿದೆ. ಈ ಬಗ್ಗೆ ಅಂಕೊಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನ ಮೂಲಿಗದ್ದೆಯ ಪ್ರದೀಪ ಮಾಣೇಶ್ವರ ನಾಯಕ ಪುಂಡಾಟ ಮೆರೆದ ಆರೋಪಿತನಾಗಿದ್ದಾನೆ.

ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯ ಸಚಿತ ಗೋವಿಂದ್ರಾಯ ನಾಯಕ. ಹಿಲ್ಲೂರು ಹಾಗೂ ನಾಗರಾಜ ಗಣಪತಿ ಹೆಗಡೆ ಹಾಗೂ ದತ್ತಾತ್ರೇಯ ಗಣಪತಿ ಹೆಗಡೆ ಹಲ್ಲೆಗೊಳಗಾದವರಾಗಿದ್ದಾರೆ.
ಎಫ್‌ಐಆರ್ ನಲ್ಲಿ ಏನಿದೆ..?
ಹಿಲ್ಲೂರು ಗ್ರಾಮದ ತಿಂಗಳಬೈಲ್‌ನ ಮೂಲಿಗದ್ದೆಯ ಪ್ರದೀಪ ತಂದೆ ಮಾಣೇಶ್ವರ ನಾಯಕ ಇತನು ಮೊದಲಿನಿಂದಲೂ ತಿಂಗಳಬೈಲ್ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆಗೆ ಬರುವ ಊರಿನ ಜನರೆಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈಯುವುದು ಮತ್ತು ಊರಿನವರೊಂದಿಗೆ ವಿನಾ ಕಾರಣ ಜಗಳ ಮಾಡುವುದು ಬೆದರಿಕೆ ಹಾಕುತ್ತಾ ತೊಂದರೆ ಕೊಡುತ್ತಾ ಬಂದಿದ್ದ.
ಹೀಗಿರುವಾಗ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಊರಿನವರೊಂದಿಗೆ ಸೇರಿಕೊಂಡು ಅಯೋಧ್ಯ ರಾಮ ಮಂದಿರದ ಉದ್ಘಾಟನೆ ಪ್ರಯುಕ್ತ ಮಂತ್ರಾಕ್ಷತೆ ಬಂದಿದ್ದನ್ನು ಊರಿನವರಿಗೆ ಹಂಚುವ ಸಲುವಾಗಿ ದೇವಸ್ಥಾನದ ಹೊರ ಆವರಣದಲ್ಲಿ ಸಿದ್ಧತೆ ಮಾಡುತ್ತಿದ್ದಾಗ ಪ್ರದೀಪ ಮಾಣೇಶ್ವರ ನಾಯಕ ಈತನು ರಾಮಲಿಂಗೇಶ್ವರ ದೇವಸ್ಥಾನದ ಆವರಣದೊಳಗೆ ಬಂದು, ದತ್ತಾತ್ರೇಯ ಗಣಪತಿ ಹೆಗಡೆ ಅವರಿಗೆ ಕೂಗಿ ಕರೆದು, ಯಾರನ್ನು ಕೇಳಿ ದೇವಸ್ಥಾನದೊಳಗೆ ಹೋಗಿದ್ದೀರಾ ಬೋಳಿಮಗನೇ, ಯಾರ ಪರ್ಮಿಶನ್ ಕೊಟ್ಟವರು ಬೋಳಿಮಕ್ಕಳಾ, ಸೂಳೆಮಕ್ಕಳಾ ನಿಮಗೆ ದೇವಸ್ಥಾನದೊಳಗೆ ಹೋಗಲು ಅಂತಾ ಹೇಳಿ, ತನ್ನ ಕೈಯಿಂದ ದತ್ತಾತ್ರೇಯ ಹೆಗಡೆ ಅವರ ಹೊಟ್ಟೆಯ ಮೇಲೆ ಬಲವಾಗಿ ಹೊಡೆದಿದ್ದಾನೆ.
ದತ್ತಾತ್ರೇಯ ಹೆಗಡೆ ಅವರಿಗೆ ಪುನಃ ಹೊಡೆಯಲು ಬಂದಾಗ ತಪ್ಪಿಸಲು ಹೋದ ದೇವಸ್ಥಾನ ಕಮೀಟಿ ಸದಸ್ಯ ಹಿಲ್ಲೂರಿನ ಸಚಿತ ಗೋವಿಂದ್ರಾಯ ನಾಯಕ ಅಂಕೋಲಾ ಇವರಿಗೆ ಕಲ್ಲಿನಿಂದ ತಲೆಯ ಮೇಲೆ ಹೊಡೆದುದ್ದಲ್ಲದೇ, ಪುನಃ ಕತ್ತಿಯನ್ನು ಹಿಡಿದುಕೊಂಡು ಹೊಡೆಯಲು ಬಂದಾಗ ತಪ್ಪಿಸಲು ಹೋದ ನಾಗರಾಜ ಗಣಪತಿ ಹೆಗಡೆ ಅವರಿಗೂ ಸಹ ಕತ್ತಿಯಿಂದ ಬಲಬದಿಯ ಕಣ್ಣಿನ ಹತ್ತಿರ ಹೊಡೆದು ಗಾಯಗೊಳಿಸಿದ್ದಾನೆ.
ಇನ್ನೊಮ್ಮೆ ಪರ್ಮಿಶನ್ ಇಲ್ಲದೇ ದೇವಸ್ಥಾನಕ್ಕೆ ಬಂದರೇ ಸೂಳೆಮಕ್ಕಳಾ ನಿಮಗೆಲ್ಲರನ್ನು ಕೊಲೆ ಮಾಢುವುದಾಗಿ ಅಂತಾ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಕೊಂಡು ಆರೋಪಿ ಪ್ರದೀಪ ತಂದೆ ಮಾಣೇಶ್ವರ ನಾಯಕ ಅವರ ಮೇಲೆ ಐಪಿಸಿ ಕಲಂ ಅಡಿ 506,504,323,324 ಪ್ರಕರಣ ದಾಖಲಾಗಿದೆ.