ವರದಿ: ದಿನಕರ ನಾಯ್ಕ, ಅಲಗೇರಿ

ಕಾರವಾರ : ತಾಲೂಕಿನ ಅಮದಳ್ಳಿಯ ಶ್ರೀ ಮಹಾದೇವರ ನೂತನ ಶಿಲಾಮಯ ಕಟ್ಟಡ ನಿರ್ಮಾಣಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಮಂಜೂರಿ ಮಾಡಿದ ರು. ೩ ಲಕ್ಷದ ಡಿ.ಡಿ ಹಸ್ತಾಂತರ ಸಮಾರಂಭ ನಡೆಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರವಾರ ತಾಲೂಕಿನ ಯೋಜನಾಧಿಕಾರಿ ವಿನಾಯಕ ನಾಯ್ಕ ರವರು ಕಟ್ಟಡ ಸಮಿತಿಯ ಅಧ್ಯಕ್ಷ ಪಾಂಡುರಂಗ ಜೋಶಿ ಮತ್ತು ಪದಾಧಿಕಾರಿಗಳಿಗೆ ಡಿ.ಡಿ ಹಸ್ತಾಂತರಿಸಿದರು.

ದೇಗುಲ ಕಟ್ಟಡ ಸಮಿತಿಯವರು ಧರ್ಮಸ್ಥಳಕ್ಕೆ ಹೋದ ಸಂದರ್ಭದಲ್ಲಿ ವಿರೇಂದ್ರ ಹೆಗ್ಗಡೆಯವರು ದೇಗುಲದ ಮಾಹಿತಿ ಪಡೆದು ಹರ್ಷ ವ್ಯಕ್ತಪಡಿಸಿದ ಕುರಿತು ಸ್ಮರಿಸಲಾಯಿತು.

ಧರ್ಮಸ್ಥಳ ಯೋಜನೆಯ ತಾಲೂಕಾ ಯೋಜನಾಧಿಕಾರಿ ವಿನಾಯಕ ನಾಯ್ಕ, ಧರ್ಮಸ್ಥಳ ಸಂಘದ ಸದಸ್ಯರಾದ ಲತಾ ನಾಯ್ಕ, ರೇಖಾ ತೆಂಡೂಲ್ಕರ್, ಸಂಧ್ಯಾ ಗಾಯಕ, ಸುಜಾತಾ ನಾಯ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಾಂಡುರಂಗ ಜೋಶಿ,ಉಪಾಧ್ಯಕ್ಷ ರಮಾಕಾಂತ್ ಗಾಂವ್ಕರ್,ಕಾರ್ಯದರ್ಶಿ ಮಹೇಂದ್ರ ಗುನಗಾ, ಖಜಾಂಚಿ ರಾಘವೇಂದ್ರ ಗಾಂವಕರ, ಗ್ರಾಮ ಪುರೋಹಿತರಾದ ಶ್ರೀಹರ್ಷ ಜೋಶಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಬಾಬುರಾವ್ ಗಾಂವ್ಕರ್, ರಾಜೇಶ ತೆಂಡೂಲ್ಕರ್, ಗ್ರಾಮ ಪಂಚಾಯತ ಅಧ್ಯಕ್ಷ ಪುರುಷೋತ್ತಮ ಗೌಡ ಗ್ರಾಮಸ್ಥರಾದ ರವೀಂದ್ರ ಅಮದಳ್ಳಿ, ಮತ್ತು ಮಾಧ್ಯಮ ಮಿತ್ರರಾದ ಪ್ರಶಾಂತ ಮಹಾಲೆ ಉಪಸ್ಥಿತರಿದ್ದರು.