ಪಾದಚಾರಿಗೆ ಬೈಕ್ ಡಿಕ್ಕಿ : ಹಟ್ಟಿಕೇರಿಯ ಗೆನು ಶೇಷು ನಾಯ್ಕ ಅವರಿಗೆ ತೀವ್ರ ಸ್ವರೂಪದ ಗಾಯ

ಅಂಕೋಲಾ ; ಪಾದಚಾರಿಯೊಬ್ಬನಿಗೆ ಬೈಕ್ ಅಫಘಾತ ಪಡಿಸಿ, ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಹಟ್ಟಿಕೇರಿ ಗ್ರಾಮದ ಬಾಬು ಗ್ಯಾರೇಜ ಹತ್ತಿರ ನಡೆದಿದೆ.
ಹಟ್ಟಿಕೇರಿಯ ಗೆನು ಶೇಷು ನಾಯ್ಕ (73) ತೀವ್ರವಾಗಿ ಗಾಯಗೊಂಡ ಪಾದಚಾರಿಯಾಗಿದ್ದಾನೆ. ವಿಶ್ಚಿತ ವೆಂಕಟದಾಸ ನಾಯ್ಕ ಬೈಕ್ ಸವಾರನಾಗಿದ್ದು, ಇತನ ಮೇಲೆ ಪೊಲೀಸ್‌ರು ಎಫ್‌ಐ.ಆರ್. ದಾಖಲಿಸಿದ್ದಾರೆ.
ಗೆನು ಶೇಷು ನಾಯ್ಕ ಅವರು ಗಂಭೀರವಾಗಿ ಗಾಯಗೊಂಡಿದ್ದರಿ0ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತೆಗೆ ಸಾಗಿಸಲಾಗಿದೆ.
ನಡೆದದ್ದೇನು..?
ಜುನ್ 26 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ಹಟ್ಟಿಕೇರಿಯ ಮಾವಿನಕೇರಿಯ ವಿಶ್ಚಿತ ತಂದೆ ವೆಂಕಟದಾಸ ನಾಯ್ಕ (20) ಇತನು ಮೋಟಾರ ಸೈಕಲ್‌ನ್ನು ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತದಿಂದ ಚಲಾಯಿಸಿಕೊಂಡು ಬಂದವನು ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಬಾಬು ಗ್ಯಾರೇಜ ಹತ್ತಿರ ತನ್ನ ಮೋಟಾರ ಸೈಕಲ್ ನೇದರ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಾಷ್ಟಿçÃಯ ಹೆದ್ದಾರಿ-66 ಚತುಷ್ಪಥ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೆನು ಶೇಷು ನಾಯ್ಕ ಇತನಿಗೆ ಹಿಂದಿನಿAದ ಢಿಕ್ಕಿ ಹೊಡೆದು ಅಪಘಾತಪಡಿಸಿದ್ದಾನೆ.
ಗೆನು ಶೇಷು ನಾಯ್ಕ ಅವರಿಗೆ ತಲೆಯ ಭಾಗದಲ್ಲಿ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ ಸೈಕಲ್‌ನ ಹಿಂಬದಿಯ ಸವಾರ ಅವರ್ಸಾ ತಾರಿಬಾಗಿಲಿನ ಸಂದೇಶ ನಾಗೇಶ ಮೇತ್ರಿ, ಪ್ರಾಯ: 24 ಈತನಿಗೆ ಮೈಗೆ. ಮುಖಕ್ಕೆ ಗಾಯನೋವು ಪಡಿಸಿದ್ದಲ್ಲದೇ ತನಗೂ ಕೂಡ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂದು ಚಂದ್ರಕಾAತ ತಂದೆ ಧಾಡು ನಾಯ್ಕ ತನ್ನ ದೂರಿನಲ್ಲಿ ತಿಳಿಸಿದ್ದಾರೆ.