TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

Jul 10, 2024 | ಅಪರಾಧ |

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ರಾಘು ಕಾಕರಮಠ.

ಅಂಕೋಲಾ : ಗೂಡಂಗಡಿಗಳಿಗೆ ತೆರಳಿ ತನ್ನ ಕೈ ಬಿಸಿ ಮಾಡಿ, ಇಲ್ಲದಿದ್ರೆ ನಿಮ್ಮ ಮೇಲೆ ಯಾವದಾದರೊಂದು ಕೇಸ್ ಜಡಿದು ನಿಮಗೆ ಜೈಲೂಟ ಮಾಡಿಸುತ್ತೇನೆ ಎಂದು ರಗಳೆ ಮಾಡುತ್ತಿದ್ದ ಪೊಲೀಸಪ್ಪನಿಗೆ ಶಾಸಕ ಸತೀಸ ಸೈಲ ಅವರು ಸರಿಯಾಗಿ ಕ್ಲಾಸ್  ತೆಗೆದುಕೊಂಡು ಬಿಸಿ ಮುಟ್ಟಿಸಿದ ಘಟನೆ ಚರ್ಚೆಗೆ ಗ್ರಾಸ್‌ವಾಗಿದೆ.

ಮೂರು ಭಾರಿ ಅಮಾನತ್‌ಗೊಂಡು ಅಂಕೋಲಾಕ್ಕೆ ವಕ್ಕರಿಸಿರುವ ಈ ಪೊಲೀಸಪ್ಪ, ತನ್ನ ಹಳೆ ಚಾಳಿಯನ್ನು ಮುಂದುವರಿಸಿಕೊ0ಡು ಅಂಕೋಲಾದಲ್ಲಿಯೂ ತನ್ನ ಕೈ ಚಳಕ ನಡೆಯ ಬಹುದೆಂದು ಭಾವಿಸಿ ಕೈ ಬಿಸಿ ಮಾಡಿಕೊಳ್ಳುವ ಪೀಲ್ಡ್ಗೆ ಇಳಿದಿದ್ದ.

ಇತನ ಉಪಟಳವನ್ನು ತಾಳಲಾರದೆ ಗೂಡಂಗಡಿಯ ಮಾಲಕರು ಶಾಸಕ ಸತೀಶ ಸೈಲ ಅವರಲ್ಲಿ ಈ ಕಾನಸ್ಟೇಬಲನ ಸುನೀತತೆಯನ್ನ ಹೇಳಿಕೊಂಡಿದ್ದರು. ಇದರಿಂದ ಕೆಂಡಮ0ಡಲರಾದ ಶಾಸಕ ಸತೀಸ ಸೈಲ ಅವರು ಕೂಡಲೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೊಲೀಸಪ್ಪ ಮಾತ್ರ ಶಾಸಕ ಸೈಲ ಅವರಲ್ಲಿ ನನ್ನ ಬೀಟ್ ವ್ಯಾಪ್ತಿಯಲ್ಲಿ ಕೆಲ ನಮ್ಮ ಪೊಲೀಸ್ ಸಿಬ್ಬಂದಿಗಳು ಕೈಯಾಡಿಸುತ್ತಿದ್ದಾರೆ. ಹಾಗಾಗಿ ನಾನು ಅವರ ಬೀಟ್ ವ್ಯಾಪ್ತಿಗೆ ಬಂದು ಗೂಡಂಗಡಿಗಳಿಗೆ ನುಗ್ಗಿದ್ದೆ ಎಂದು ಹೇಳಿ ಕೊಂಡಿದ್ದಾನೆ.

ನೀನು ಹೀಗೆ ಮಾಡಿದರೆ ನಿನ್ನ ಯೂನಿಪಾರ್ಮ್ನ್ನ ಖಾಯಂ ಆಗಿ ನಿನ್ನ ಮನೆಯ ಕಪಾಟಿಗೆ ಹೋಗುವಂತೆ ನೋಡಿಕೊಳ್ಳಬೇಕಾದೀತು. ನನ್ನ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವದಿಲ್ಲ. ಅವರ ತಂಟೆಗೆ ಬಂದರೆ ನಿನಗೆ ಹಿಡಿದಿರುವ ಭೂತ ಬಿಡಿಸುತ್ತೇಂದು ಖಾರ್‌ವಾಗಿಯೆ ಶಾಸಕ ಸತಿಶ ಸೈಲ ಉಗಿದಿದ್ದಾರೆ ಎಂದು ಗೊತ್ತಾಗಿದೆ.

ಇನ್ನು ಮುಂದೆ ಹಾಗಾಗಲು ಬಿಡುವದಿಲ್ಲ. ಕ್ಷಮಿಸಿ ಎಂದು ಪೊಲೀಸಪ್ಪ ಅಂಗಲಾಚಿ ಬೇಡಿಕೊಂಡ ಹಿನ್ನಲೆಯಲ್ಲಿ ಶಾಸಕ ಸೈಲ ಸಮಾಧಾನಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ

ಅಂತೂ ಈ ಪೊಲೀಸಪ್ಪನ ಕೈ ಬಿಸಿ ಕಹಾನಿಯು ನಗರದಲ್ಲಿ ಭಾರಿ ಸುದ್ದಿ ಮಾಡಿದ್ದು, ಶಾಸಕ ಸತೀಶ ಸೈಲ ಅವರ ಜನಪರ ಕಾಳಜಿಗೆ ಶ್ಲಾಘನೆಯ ಮಾತುಗಳು ವ್ಯಕ್ತವಾಗಿದೆ.

Share:

Rate:

Previousಪಾದಚಾರಿಗೆ ಬೈಕ್ ಡಿಕ್ಕಿ : ಹಟ್ಟಿಕೇರಿಯ ಗೆನು ಶೇಷು ನಾಯ್ಕ ಅವರಿಗೆ ತೀವ್ರ ಸ್ವರೂಪದ ಗಾಯ
Nextಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಗ್ಯಾಂಗ್ ಅಂಕೋಲಾದಲ್ಲಿ ಸಕ್ರೀಯ

Related Posts

ಬಡವರ ಪ್ರಾಣ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ :

ಬಡವರ ಪ್ರಾಣ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ :

February 6, 2025

ನಾಪತ್ತೆಯಾದ ಬಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ

ನಾಪತ್ತೆಯಾದ ಬಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ

October 21, 2023

ಅವರ್ಸಾ, ಸಕಲಬೇಣ ಮತ್ತು ಹಾರವಾಡದಲ್ಲಿ ಬಿಂದಾಸ್ಆಗಿ ತೆರೆದುಕೊಂಡ ಮಟ್ಕಾದಂದೆ.

ಅವರ್ಸಾ, ಸಕಲಬೇಣ ಮತ್ತು ಹಾರವಾಡದಲ್ಲಿ ಬಿಂದಾಸ್ಆಗಿ ತೆರೆದುಕೊಂಡ ಮಟ್ಕಾದಂದೆ.

October 9, 2023

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

July 8, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
    ಇಂದು ಅಂಕೋಲಾಕ್ಕೆ ಆಗಮಿಸಿ ಕಣಕಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಗೋಪಾಲಕೃಷ್ಣ ನಾಯಕ
  • ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
    ಹಾಡು ಹಗಲೇ ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ನಾಯಕ ಮೇಲೆ ಕೊಲೆ ಯತ್ನ: ಚಾಕುವಿನಿಂದ ಇರಿದು ಪರಾರಿಯಾದ ಗ್ಯಾಂಗ್
  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy