ಶಾಸಕ ಸತೀಶ ಸೈಲಗೆ ಬಿಗ್ ರಿಲೀಫ್ :
ಮುಡಿ ನೀಡಿ ಹರಕೆ ಒಪ್ಪಿಸಿದ ಅಭಿಮಾನಿ
ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಶಾಸಕ ಸತೀಶ ಸೈಲ ಅವರಿಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್ ದೊರೆತ ಹಿನ್ನಲೆಯಲ್ಲಿ ಅವರ ಅಪ್ಪಟ ಅಭಿಮಾನಿ ಅವರ್ಸಾ ದಂಡೇಭಾಗದ ಗಣಪತಿ ನಾಯ್ಕ. ಅವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ತನ್ನ ಮುಡಿ ನೀಡಿ ಹಾಗೂ ಅನ್ನದಾನ ಮಾಡಿ ಹರಕೆ ಒಪ್ಪಿಸಿ ವಾಪಾಸ್ಸಾಗಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾಸಕ ಸತೀಶ ಸೈಲ ಅವರ ಕಷ್ಟ ಕೂಡಲೆ ನಿವಾರಣೆಯಾಗಿ, ಜನತೆಯ ಸೇವೆಗೆ ಲಭ್ಯರಾದಲ್ಲಿ ಬೈಕ್ ಮೂಲಕ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಗೆ ತನ್ನ ಮುಡಿ ಹಾಗೂ ಅನ್ನದಾನ ಮಾಡುತ್ತೇನೆ ಎಂದು ಅವರ್ಸಾ ದಂಡೇಭಾಗದ ಗಣಪತಿ ನಾಯ್ಕ ಅವರು ಹರಕೆ ಕಟ್ಟಿಕೊಂಡಿದ್ದರು.
ಶಾಸಕ ಸತೀಶ ಸೈಲ ಅವರಿಗೆ ಜನಪ್ರತಿಧಿಗಳ ನ್ಯಾಯಾಲಯ ನೀಡಿದ ಶಿಕ್ಷೆಯ ತೀರ್ಪನ್ನು ಅಮಾನತನಲ್ಲಿಟ್ಟ ಹೈಕೋರ್ಟ್ ಆದೇಶದಿಂದ ಸಂತಸಗೊAಡ ಗÀಣಪತಿ ನಾಯ್ಕ ಅವರು ಹರಕೆ ಒಪ್ಪಿಸಿ ಧನ್ಯತೆ ಮರೆದಿದ್ದಾರೆ. ಧರ್ಮಸ್ಥಳದ ಪ್ರಸಾದವನ್ನು ಗಣಪತಿ ನಾಯ್ಕ ಅವರಿಂದ ಪಡೆದ ಶಾಸಕ ಸತೀಶ ಸೈಲ ಅವರು ಆತ್ಮೀಯತೆಯಿಂದ ಅಪ್ಪಿಕೊಂಡು ಅಭಿಮಾನಿಯ ಭಾವುಕತೆಗೆ ಬೆರಗಾಗಿದ್ದಾರೆ.