ಮೈ ಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಗುಜರಿ ಸಾಮಾನು ತೆಗೆದುಕೊಳ್ಳುವ ವ್ಯಕ್ತಿಗೆ ಧರ್ಮದೇಟು

ಅಂಕೋಲಾ : ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಗುಜರಿ ಸಾಮಾನು ತೆಗೆದುಕೊಳ್ಳುವ ವ್ಯಕ್ತಿಗೆ ಧರ್ಮದೇಟು ನೀಡಿ ಮೈ ಚಳಿ ಬಿಡಿಸಿದ ಘಟನೆ ತಾಲೂಕಿನ ಬಾಸ್ಗೋಡದಲ್ಲಿ ಸಮೀಪ ತಡವಾಗಿ ಬೆಳಕಿಗೆ ನಡೆದಿದೆ.
ಮೈ ಸವರಲು ಹೋದ ಮೊಡಕಾ ವ್ಯಾಪಾರಿ :
ಬೈಕ್‌ನಲ್ಲಿ ಗುಜರಿ (ಮೊಡಕಾ) ವ್ಯಾಪಾರ ಮಾಡಲು ಬೆಳಿಗ್ಗೆಯೆ ಎದ್ದು ಶ್ರೀ ಮಂಜುನಾಥನಿಗೆ ಕೈ ಮುಗಿದು ಹೊರಟಿದ್ದಾನೆ. ಬಾಸ್ಗೋಡದಲ್ಲಿ ಮನೆಯ ಇದ್ದ ಪ್ಲಾಸ್ಟಿ÷್ಟಕ್ ಸಾಮಾನುಗಳನ್ನು ಮಹಿಯೊಬ್ಬಳಿಂದ ಖರೀದಿಸಿದ್ದಾನೆ.
ಈ ಗುಜರಿ ಸಾಮಾನಿಗೆ 270 ರೂಪಾಯಿ ಆಗತ್ತೆ, ಆದರೆ ನಿಮನ್ನು ನೋಡಿದರೆ ನನಗೆ ಏನೋ ಖುಷಿ ಆಗತ್ತೆ. ಹೀಗಾಗಿ ಗುಜರಿಗೆ 500 ರೂ ಕೊಡುತ್ತೇನೆ ಎಂದು ಪುಸಲಾಯಿಸುತ್ತಲೆ, ಮೈ ಮುಟ್ಟಿ ಮಜಾ ತೆಗೆದುಕೊಳ್ಳಲು ಮುಂದಾದ ಈ ಕಾಮುಕ ವರ್ತನೆ ಕಂಡ ಮಹಿಳೆ ಭದ್ರಕಾಳಿಯ ರೂಪ ತಾಳಿದ ಈಕೆ ಹಿಡಿಮುಟ್ಟೆಯ (ಪೊರಕೆ) ಶಾಸ್ತç ನಡೆಸಿ, ಧರ್ಮದೇಟು ನೀಡಿದ್ದಾಳೆ.
ಈಕೆಯಿಂದ ಹೇಗೊ ತಪ್ಪಿಸಿಕೊಂಡು, ತೆಗೆದುಕೊಂಡ ಗುಜರಿ ಸಾಮಾನು ಬೈಕ್ ಏರಿ ತೆರಳಿದ್ದ ಈ ವ್ಯಕ್ತಿ ಜೀವ ತಪ್ಪಿಸಿಕೊಂಡು ಅಂಕೋಲಾದಿ0ದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ವರ್ತನೆ ನೋಡಿದರೆ ಗಾಂಜಾ ಅಮಲೇರಿಸಿಕೊಂಡು ಬಂದವನ0ತೆ ಕಂಡು ಬರುತ್ತಿತ್ತು ಎಂದು ನಾಗರಿಕರೆ ಸಂಶಯ ವ್ಯಕ್ತಪಡಿಸುತ್ತಾರೆ.