ಅಂಕೋಲಾ : ಟ್ಯೂಷನ್ ಗೆ ಹೋಗಿ ಅಲ್ಲಿಂದ ಶಾಲೆಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟಿದ್ದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇಟಗೇರಿಯ ಭಾರ್ಗವ ರಮೇಶ ನಾಯಕ (15) ನಾಪತ್ತೆಯಾದವನಾಗಿದ್ದಾನೆ.

ಏನಾಗಿತ್ತು.. ?

ಅಂಕೋಲಾ ಪಟ್ಟಣದ ಹೃದಯ ಭಾಗದಲ್ಲಿರುವ ನಿರ್ಮಲ ಹೃದಯ ಆಂಗ್ಲ ಪ್ರೌಡ ಶಾಲೆಯಲ್ಲಿ ಭಾರ್ಗವ ರಮೇಶ ನಾಯಕ 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ಎಂದಿನಂತೆ ಬೆಳಿಗ್ಗೆ 8 ಗಂಟೆಗೆ ವಿದ್ಯಾರ್ಥಿ ಭಾರ್ಗವ ನಾಯಕ ಮನೆಯಿಂದ ಟ್ಯೂಷನ್ ಹೋಗಿ ಅಲ್ಲಿಂದ ಶಾಲೆಗೆ ಹೋಗಿ ಮರಳಿ ಸಂಜೆ ಮನೆಗೆ ಬರುತ್ತಿದ್ದ.  ಆದರೆ ಅಕ್ಟೋಬರ್ 30 ರ ಸೋಮವಾರ ಬೆಳಿಗ್ಗೆ ಟ್ಯೂಷನಗೆ ಹೋಗಿ, ಶಾಲೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರಟವನು, ಟ್ಯೂಷನಗೂ ಹೋಗದೆ, ಶಾಲೆಗೂ ತೆರಳದೆ ನಾಪತ್ತೆಯಾಗಿದ್ದಾನೆ.

ಇತನನ್ನು ಯಾರಾದರೂ ಅಪಹರಿಸಿಕೊಂಡು ಹೋಗಿರಬಹುದು. ಈ ಹಿನ್ಬಲೆಯಲ್ಲಿ ತನ್ನ ಮಗನನ್ನು ಹುಡುಕಿಕೊಡುವಂತೆ ವಿದ್ಯಾರ್ಥಿಯ ತಂದೆ ರಮೇಶ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.

5 ಪುಟ್ 6 ಇಂಚ್ ಎತ್ತರವಿರುವ ಭಾರ್ಗವ  ನಾಯಕ ಕನ್ನಡ, ಇಂಗ್ಲೀಷ ಹಾಗೂ ಹಿಂದಿ ಭಾಷೆ ಬಲ್ಲವನಾಗಿದ್ದಾನೆ. ಕಪ್ಪು ಮೈ ಬಣ್ಣ, ಗೋಲು ಮುಖ, ಸದೃಡ ಮೈಕಟ್ಟು ಹೊಂದಿದವನಾಗಿದ್ದು, ನಾಪತ್ತೆಯಾದ ಸಂದರ್ಭದಲ್ಲಿ ಮೆಹಂದಿ ಬಣ್ಣದ ಪೂರ್ತಿ ತೋಳಿನ ಚಕ್ಸ್ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಸ್ಯಾಂಡಲ ಧರಿಸಿದ್ದಾನೆ.

ಈತನ ಬಗ್ಗೆ  ಎಲ್ಲರೂ ಮಾಹಿತಿ ಕಂಡು ಬಂದಲ್ಲಿ ಅಂಕೋಲಾ ಠಾಣೆಯ ಮೊಬೈಲ ಸಂಖ್ಯೆ 9480805250 ಅಥವಾ 9480805268 ನಂಬರಗೆ ಸಂರ್ಪರ್ಕಿಸುವಂತೆ ಪೊಲೀಸ್ ಪ್ರಕಟಣೆಲ್ಲಿ ತಿಳಿಸಿದೆ.