ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ರಾಘು ಕಾಕರಮಠ.
ಅಂಕೋಲಾ : ಗೂಡಂಗಡಿಗಳಿಗೆ ತೆರಳಿ ತನ್ನ ಕೈ ಬಿಸಿ ಮಾಡಿ, ಇಲ್ಲದಿದ್ರೆ ನಿಮ್ಮ ಮೇಲೆ ಯಾವದಾದರೊಂದು ಕೇಸ್ ಜಡಿದು ನಿಮಗೆ ಜೈಲೂಟ ಮಾಡಿಸುತ್ತೇನೆ ಎಂದು ರಗಳೆ ಮಾಡುತ್ತಿದ್ದ ಪೊಲೀಸಪ್ಪನಿಗೆ ಶಾಸಕ ಸತೀಸ ಸೈಲ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡು ಬಿಸಿ ಮುಟ್ಟಿಸಿದ ಘಟನೆ ಚರ್ಚೆಗೆ ಗ್ರಾಸ್‌ವಾಗಿದೆ.
ಮೂರು ಭಾರಿ ಅಮಾನತ್‌ಗೊಂಡು ಅಂಕೋಲಾಕ್ಕೆ ವಕ್ಕರಿಸಿರುವ ಈ ಪೊಲೀಸಪ್ಪ, ತನ್ನ ಹಳೆ ಚಾಳಿಯನ್ನು ಮುಂದುವರಿಸಿಕೊ0ಡು ಅಂಕೋಲಾದಲ್ಲಿಯೂ ತನ್ನ ಕೈ ಚಳಕ ನಡೆಯ ಬಹುದೆಂದು ಭಾವಿಸಿ ಕೈ ಬಿಸಿ ಮಾಡಿಕೊಳ್ಳುವ ಪೀಲ್ಡ್ಗೆ ಇಳಿದಿದ್ದ.
ಇತನ ಉಪಟಳವನ್ನು ತಾಳಲಾರದೆ ಗೂಡಂಗಡಿಯ ಮಾಲಕರು ಶಾಸಕ ಸತೀಶ ಸೈಲ ಅವರಲ್ಲಿ ಈ ಕಾನಸ್ಟೇಬಲನ ಸುನೀತತೆಯನ್ನ ಹೇಳಿಕೊಂಡಿದ್ದರು. ಇದರಿಂದ ಕೆಂಡಮ0ಡಲರಾದ ಶಾಸಕ ಸತೀಸ ಸೈಲ ಅವರು ಕೂಡಲೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೊಲೀಸಪ್ಪ ಮಾತ್ರ ಶಾಸಕ ಸೈಲ ಅವರಲ್ಲಿ ನನ್ನ ಬೀಟ್ ವ್ಯಾಪ್ತಿಯಲ್ಲಿ ಕೆಲ ನಮ್ಮ ಪೊಲೀಸ್ ಸಿಬ್ಬಂದಿಗಳು ಕೈಯಾಡಿಸುತ್ತಿದ್ದಾರೆ. ಹಾಗಾಗಿ ನಾನು ಅವರ ಬೀಟ್ ವ್ಯಾಪ್ತಿಗೆ ಬಂದು ಗೂಡಂಗಡಿಗಳಿಗೆ ನುಗ್ಗಿದ್ದೆ ಎಂದು ಹೇಳಿ ಕೊಂಡಿದ್ದಾನೆ.
ನೀನು ಹೀಗೆ ಮಾಡಿದರೆ ನಿನ್ನ ಯೂನಿಪಾರ್ಮ್ನ್ನ ಖಾಯಂ ಆಗಿ ನಿನ್ನ ಮನೆಯ ಕಪಾಟಿಗೆ ಹೋಗುವಂತೆ ನೋಡಿಕೊಳ್ಳಬೇಕಾದೀತು. ನನ್ನ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವದಿಲ್ಲ. ಅವರ ತಂಟೆಗೆ ಬಂದರೆ ನಿನಗೆ ಹಿಡಿದಿರುವ ಭೂತ ಬಿಡಿಸುತ್ತೇಂದು ಖಾರ್‌ವಾಗಿಯೆ ಶಾಸಕ ಸತಿಶ ಸೈಲ ಉಗಿದಿದ್ದಾರೆ ಎಂದು ಗೊತ್ತಾಗಿದೆ.
ಇನ್ನು ಮುಂದೆ ಹಾಗಾಗಲು ಬಿಡುವದಿಲ್ಲ. ಕ್ಷಮಿಸಿ ಎಂದು ಪೊಲೀಸಪ್ಪ ಅಂಗಲಾಚಿ ಬೇಡಿಕೊಂಡ ಹಿನ್ನಲೆಯಲ್ಲಿ ಶಾಸಕ ಸೈಲ ಸಮಾಧಾನಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ
ಅಂತೂ ಈ ಪೊಲೀಸಪ್ಪನ ಕೈ ಬಿಸಿ ಕಹಾನಿಯು ನಗರದಲ್ಲಿ ಭಾರಿ ಸುದ್ದಿ ಮಾಡಿದ್ದು, ಶಾಸಕ ಸತೀಶ ಸೈಲ ಅವರ ಜನಪರ ಕಾಳಜಿಗೆ ಶ್ಲಾಘನೆಯ ಮಾತುಗಳು ವ್ಯಕ್ತವಾಗಿದೆ.