ಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಗ್ಯಾಂಗ್ ಅಂಕೋಲಾದಲ್ಲಿ ಸಕ್ರೀಯ
ಪ್ರಯಾಣಿಕರಲ್ಲಿ ಆತಂಕ ತಂದ ಕಳ್ಳತನ ಪ್ರಕರಣ

ಅಂಕೋಲಾ : ತಾಲೂಕಿನ ಸರಹದ್ದಿನ ವ್ಯಾಪ್ತಿಯಲ್ಲಿ ರೇಲ್ವೆ ಪ್ರಯಾಣಿಕರ ವಸ್ತುಗಳನ್ನು ದೋಚುವ ವ್ಯವಸ್ಥಿತ ಗ್ಯಾಂಗ್ನಿAದಾಗಿ ರೇಲ್ವೆ ಪ್ರಯಾಣಿಕರಲ್ಲಿ ಆತಂಕವನ್ನು ಉಂಟು ಮಾಡಿದೆ.
ಕಳೆದೊಂದು ವರ್ಷದಿಂದ ಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸಿರುವ ನಾಲ್ಕು ಪ್ರಕರಣಗಳು ಅಂಕೋಲಾ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳು ಮಾತ್ರ ಪೊಲೀಸರಿಗೆ ಸಿಗದೇ ತಮ್ಮ ಕಳ್ಳತನ ಕರಾಮತ್ತು ಮುಂದುವರೆಸಿದ್ದಾರೆ.
ನಡೆದದ್ದೇನು..?
ಮAಗಳೂರಿನಿAದ ಪೋರಬಂದರಕ್ಕೆ ಮೀನಾಕ್ಷಿಬೆನ್ ಚಂದ್ರಕಾAತ ಗಂಗೋರಿ ಅವರು ಕೆ.ಸಿ.ವಿ.ಎಲ್. ಎಕ್ಸಪ್ರೇಸ್ ರೇಲ್ವೆಯ ಸ್ಲೋಪರ್ ಕೋಚಲ್ಲಿ ಪ್ರಯಾಣ ಬೆಳೆಸಿದ್ದರು. ರೇಲ್ವೆ ಗೋಕರ್ಣದಿಂದ ಅಂಕೋಲಾದತ್ತ ಸಾಗುತ್ತಿರುವಾಗ ಬೆಳಗಿನ ಜಾವ 1-15 ರ ಸುಮಾರಿಗೆ ಕಳ್ಳರು 30 ಸಾವಿರ ಮೌಲ್ಯದ ಮೊಭೈಲ ಪೋನ್, ಪಾನ್ ಕಾರ್ಡ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದಾರೆ.
ಈ ಬಗ್ಗೆ ದೂರನ್ನು ಮೀನಾಕ್ಷಿಬೆನ್ ಚಂದ್ರಕಾAತ ಗಂಗೋರಿ ಅವರು ಕಾರವಾರದ ರೇಲ್ವೆ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು. ಕಾರವಾರದ ರೇಲ್ವೆ ಪೊಲೀಸರು ಪ್ರಕರಣವನ್ನು ಅಂಕೋಲಾ ಪೊಲೀಸರಿಗೆ ಹಸ್ತಾಂತರಿಸಿ ಕಾನೂನು ಕ್ರಮ ಜರುಗಿದ್ದಾರೆ.
ಪಿಎಸೈ ಜಯಶ್ರೀ ಪ್ರಭಾಕರ ಅವರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತಗೆ ಮುಂದಾಗಿದ್ದಾರೆ. ರೇಲ್ವೆ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಪ್ರಕರಣದಿಂದಾಗಿ ಕೊಂಕಣ ರೇಲ್ವೆ ಎಂದರೆ ಭಯ ಪಡುವ ಸ್ಥಿತಿ ಪ್ರಯಾಣಿಕರದ್ದಾಗಿದೆ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನು ಪತ್ತೆ ಮಾಡಿ ಪ್ರಯಾಣಿಕರ ನೆಮ್ಮದಿಗೆ ಕಾರನರಾಗಬೇಕಿದೆ ಎಂಬ ಆಗ್ರಹ ಕೂಗು ಬಲವಾಗಿ ಕೇಳಿ ಬಂದಿದೆ.