ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ : ಐವರು ಆರೋಪಿಗಳ ಬಂಧನ
ಪ್ರಕರಣದಿಂದ ಸೇಫ್ ಕಮಲಣ್ಣ
ಗೋಕರ್ಣ : ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಗೋಕರ್ಣದ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ, ಜೂಜಾಟಕ್ಕೆ ಬಳಸಿದ್ದ ಪರಿಕರ ಮತ್ತು ಬೈಕ್‌ಗಳನ್ನು ವಶ ಪಡಿಸಿಕೊಂಡಿರುವ ಘಟನೆ ಪತಂಗ್ ಬೀಚ್ ರೆಸಾರ್ಟ ಹಿಂಬದಿಯ ಸಮುದ್ರದ ದಡದ ಪ್ರದೇಶದಲ್ಲಿ ನಡೆದಿದೆ.
ಹೊನ್ನಾವರ ಕೋಳಿಗದ್ದೆಯ ಕವಲಕ್ಕಿಯ ನಿವಾಸಿ ವಿನಾಯಕ ರಾಮಾ ನಾಯ್ಕ, ಪ್ರಾಯ:- 38 ವರ್ಷ, ಕುಮಟಾದ ಶಶಿಹಿತ್ತಲಿನ ಕೋಳಿಗದ್ದೆಯ ನಿವಾಸಿ ಈಶ್ವರ ಸುಬ್ರಾಯ ಭಂಡಾರಿ, ಅಂಕೋಲಾದ ಹೊನ್ನೇಕೇರಿಯ ಸಂಜಯ ರಾಕು ನಾಯ್ಕ, ಅಂಕೋಲಾದ ಕೇಣಿಯ ಪ್ರಮೋದ ಗಣಪತಿ ಬಂಟ, ಅಂಕೋಲಾದ ಹೊನ್ನೇಕೇರಿಯ ಗೌರೀಶ ಸುರೇಶ ನಾಯ್ಕ ಘಟನಾ ಸ್ಥಳದಲ್ಲಿ ಸಿಕ್ಕ ಬಂಧಿತ ಆರೋಪಿಗಳಾಗಿದ್ದಾರೆ.
ಪೊಲೀಸರು 8 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಬಾಗಿಯಾದ ಇನ್ನಿತರ ಆರೋಪಿಗಳ ಪತ್ತಗೆ ಬಲೆ ಬೀಸಿದ್ದಾರೆ. 9940 ರೂ ನಗದು ಹಾಗೂ 3 ಅಂಕಕ್ಕೆ ಬಳಸಿದ ಹುಂಜಗಳು, 2 ಕೋಳಿ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಕೋಳಿ ಅಂಕ ನಡೆಸುತ್ತಿದ್ದ ಮೂಲ ಆರೋಪಿ ಕಮಲಣ್ಣನನ್ನು ಪ್ರಕರಣದಿಂದ ಕೈ ಬಿಟ್ಟು ಬಲಿ ಬಕ್ರಾ ಅಂಕೋಲಾ ಹಾಗೂ ಕುಮಟಾ, ಹೊನ್ನಾವರಕಾ ಚೊಕ್ರಾ ಎನ್ನುವಂತೆ ಇತರೆ ಆರೋಪಿಗಳನ್ನು ಬಂಧಿಸಿ ಕಾನೂನಿನ ಕುಣಿಕೆಗೆ ಸೇರಿಸಿರುವದು ಕೂಡ ಆರೋಪಗಳು ಕೂಡ ಕೇಳಿ ಬಂದಿದೆ.
ಸಿಪಿಐ ವಸಂತ ಆಚಾರಿ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.