32 ವರ್ಷದ ನಂತರ ವಿಚ್ಛೇಧನ ಕೇಳಲು ಮುಂದಾದ ಪತ್ನಿ
ಅಂಕೋಲಾ : ಮದುವೆಯಾದ 32 ವರ್ಷದ ನಂತರ ನನ್ನ ಪತ್ನಿ ನನಗೆ ವಿಚ್ಛೇಧನ ಕೇಳುತ್ತಿದ್ದಾಳೆ. ಈ ವೃದಾಪ್ಯದ ಕಾಲದಲ್ಲಿ ನಾನೆಲ್ಲಿ ಹೋಗಲಿ. ನನ್ನ ಪತ್ನಿಗೆ ಬುದ್ದಿವಾದ ಹೇಳಿ ನನ್ನೊಂದಿಗೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಪತಿ ಅಂಕೋಲಾ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.
ಡೊಂಗ್ರಿ ಗ್ರಾಮದ ಹೆಗ್ಗರಣಿಯ 59 ರ ಪ್ರಾಯದ ಗಣೇಶನ ನಾಮದ ಹೆಸರಿನ ವ್ಯಕ್ತಿಯೊಬ್ಬ ಕಣ್ಣೀರು ಇಡುತ್ತಲೆ ಅಂಕೋಲಾ ಠಾಣೆಯ ಪೊಲೀಸರ ಎದುರು ತನ್ನ ದುಸ್ಥಿತಿಯನ್ನು ಹೇಳಿಕೊಂಡಿದ್ದಾನೆ.
ಮೂವರು ಮಕ್ಕಳು ಸಹ ನನಗೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಸೀಬರ್ಡ್ ಯೋಜನೆಯಿಂದ ಲಕ್ಷಾಂತರ ಹಣ ನನಗೆ ಬಂದಿಗೆ. ನಾನೊಬ್ಬ ಕೋಟ್ಯಾಂತರ ಆಸ್ತಿಯ ತ್ರಾಣಿಕ. ಆದರೆ ಮನೆಯಲ್ಲಿ ಮಾತ್ರ ನನಗೆ ನೆಮ್ಮದಿ ಇಲ್ಲ. ನನನಗೆ ಹೆಂಡತಿಯೊಬ್ಬಳು ಮನೆಯೊಳಗೆ ಇದ್ದರೆ ಅದೆ ಕೋಟಿ ರೂಪಾಯಿ. ದಯಮಾಡಿ ನನಗೆ ನ್ಯಾಯ ಒದಗಿಸಿ ಕೊಡಿ ಎಂದು ಪೊಲೀಸರ ಎದುರು ಅವಲೊತ್ತಿಕೊಂಡಿದ್ದಾನೆ.
.