ಅಶ್ಲೀಲ ಸಂದೇಶ ಕಳುಹಿಸಿದ ಪುರೋಹಿತನ ಗ್ರಹಚಾರ ಬಿಡಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ
ಅಂಕೋಲಾದ ಕನಕನಹಳ್ಳಿಯಲ್ಲಿ ನಡೆದ ಘಟನೆ

ಅಶ್ಲೀಲ ಸಂದೇಶ ಕಳುಹಿಸಿದ ಪುರೋಹಿತನ ಗ್ರಹಚಾರ ಬಿಡಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ
ವರದಿ : ಕೆಇಬಿ ಮಂಜು.
ಅಂಕೋಲಾ : ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಕಾಮಕೇಳಿಗೆ ಪ್ರಚೋದನೆ ನೀಡುತ್ತಿದ್ದ ಪುರೋಹಿತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹಿಳೆಯೊಬ್ಬಳು ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಬುಧವಾರ ನಡೆದಿದೆ.
ಡೊಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪುರೋಹಿತನ ಅಶ್ಲೀಲ ದುರ್ವತನೆಯಿಂದ ಬೇಸೆತ್ತ ಮಹಿಳೆಯು ಛಲ ಬಿಡದೆ, ದಿಟ್ಟವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.

ನಡೆದದ್ದೇನು..?
ಕನಕನಹಳ್ಳಿಯ ಮಹಿಳೆಯೊಬ್ಬಳಿಗೆ ನಿರಂತರವಾಗಿ ವಾಟ್ಸ್ಪ ಮೂಲಕ ಅಶ್ಲೀÃಲ ಸಂದೇಶ ಮತ್ತು ತನ್ನ ಗುಪ್ತಾಂಗದ ಚಿತ್ರಗಳನ್ನು ಕಳುಹಿಸಿ, ನಿನ್ನದು ಕಳುಹಿಸು ಎಂದು ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಸಭ್ಯ ಹೆಣ್ಣು ಮಗಳು, ಆತನ ಸಂದೇಶಕ್ಕೆ ಪ್ರತಿಕೃಯಿಸದೆ ಸುಮ್ಮನಾಗಿದ್ದಳು. ಆದರೆ ಬರಬರುತ್ತ ಈತನ ವರ್ತನೆ ಮೀತಿ ಮೀರುತ್ತ ನಾವಿಬ್ಬರು ಓಡಿ ಹೋಗೋಣ ಬಾ. ನನಗೆ ಹೆಣ್ಣು ಸಿಗುತ್ತಿಲ್ಲ. ನಿನ್ನನ್ನು ರಾಣಿ ಥರಾ ನೋಡಿಕೊಳ್ಳತೀನಿ ಎಂದು ಪುಸಲಾಯಿಸುತ್ತಲೆ ಸಂದೇಶ ಕಳುಹಿಸಿದ್ದ ಎಂದು ತಿಳಿದುಬಂದಿದೆ.
ಕೊನೆಯ ಪುರೋಹಿತನ ಗ್ರಹಚಾರ ಬಿಡಿಸಲು ಮುಂದಾದ ಮುಹಿಳೆ ಕಾರವಾರದ ಸೆನ್ ಠಾಣೆ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ನೀರಿಕ್ಷಕ ಚಂದ್ರಶೇಖರ ಮಠಪತಿ ಅವರಲ್ಲಿ ತನ್ನ ದೂರನ್ನು ತೋಡಿಕೊಂಡಿದ್ದಾಳೆ.
ಘಟನೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈ ಪ್ರಕರಣ ಮಹಿಳಾ ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಯುತವಾಗಿ ಗಮನ ಸೆಳೆದಿದೆ.