ಅಂಕೋಲಾ : ಗಾಂಜಾ ಸೇವಿಸುತ್ತಿದ್ದ ವೇಳೆ ಅಂಕೋಲಾ ಪೊಲೀಸರು ದಾಳಿ ನಡೆಸಿ ಮೂವರನ್ನ ವಶಕ್ಕೆ ಪಡೆದಿರುವ ಘಟನೆ ಬಾಳೆಗುಳಿಯ ಅಲಗೇರಿ ಕ್ರಾಸ್ ಬಳಿ ನಡೆದಿದೆ.

ಭಾವಿಕೇರಿಯ ಹರಿಕಂತ್ರವಾಡದ ರಾಘವೇಂದ್ರ ಗೋಪಾಲ ಹರಿಕಂತ್ರ, ಬಾಳೆಗುಳಿಯ ಕೃಷ್ಣಾಪುರದ ಸುಜನ ಬೀರಣ್ಣ ನಾಯಕ ಹಾಗೂ ಸಣ್ಣ ಅಲಗೇರಿಯ ಗಣೇಶ ತಂದೆ ಲಕ್ಷ್ಮಣ ನಾಯಕ ಬಂಧಿತ ಆರೋಪಗಳು.

ಪೊಲೀಸರು ಹೇಳೊದೆನು..?

ಆರೋಪಿತರಾದ ಈ ಮೂವರು ಜೂನ್ 25 ರಂದು ಸಂಜೆ 5-15 ಗಂಟೆಗೆ ಅಂಕೋಲಾ ತಾಲೂಕಿನ ಬಾಳೆಗುಳಿಯ ಅಲಗೇರಿ ಕ್ರಾಸ್ ಬಳಿಯ ಅರಣ್ಯ ಪ್ರದೇಶದ ಖುಲ್ಲಾ ಸ್ಥಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿದಾಗ ಮಾಧಕ ವಸ್ತುವನ್ನು ಸೇವನೆ ಮಾಡಿದ ಹಾಗೆ ಕಂಡು ಬಂದಿದ್ದು, ಸದ್ರಿಯವರ ಬಾಯಿಯಿಂದ ಯಾವುದೋ ಘಾಟು ವಾಸನೆ ಬರುತ್ತಿದ್ದರಿಂದ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ, ಆರೋಪಿತರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರು.

ಆರೋಪಿತರು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದೆ ಎಂದು ಜೂನ್. 27 ರಂದು ವೈದ್ಯಕೀಯ ಪರೀಕ್ಷೆಯ ವರದಿಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವರದಿಯ ಪೊಲೀಸರಿಗೆ ನೀಡಿದೆ. ಈ ಹಿನ್ನಲೆಯಲ್ಲಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ ಎಂದು ಸಿಪಿಐ ಸಂತೋಷ ಶೆಟ್ಟಿ ತಿಳಿಸಿದ್ದಾರೆ.