ಶಿರಸಿ: ಅಬಕಾರಿ ಉಪವಿಭಾಗ ಹಾಗೂ ಪೋಲಿಸ್ ಇಲಾಖೆಯಿಂದ 2019-20 ನೇ ಸಾಲಿನ 15 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು 1.75 ಲಕ್ಷ ರೂ ಬೆಲೆಯ ಮದ್ಯವನ್ನು ಗುರುವಾರ ನಾಶ ಪಡಿಸಲಾಯಿತು.1.65 ಲಕ್ಷ ರೂ ಬೆಲೆಯ 337.77 ಲೀಟರ್ ಮದ್ಯ, 9 ಸಾವಿರ ರೂ ಬೆಲೆಯ 71 ಲೀಟರ್ ಬಿಯರ್ ಹಾಗೂ 700 ರೂ ಬೆಲೆಯ 7 ಲೀಟರ್ ಕಳ್ಳಬಟ್ಟಿ ಸರಾಯಿಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಶಿರಸಿ ಅಬಕಾರಿ ಇಲಾಖೆಯ ಕಚೇರಿಯಲ್ಲಿ ನಾಶಪಡಿಸಲಾಯಿತು.
ಶಿರಸಿ ಉಪ ವಿಭಾಗದ ಉಪ ಅಧೀಕ್ಷಕ ಎಚ್ ಶಿವಪ್ಪ, ಅಬಕಾರಿ ನಿರೀಕ್ಷಕರುಗಳಾದ ಮಹೆಂದ್ರ ಎಸ್ ನಾಯ್ಕ, ಜ್ಯೋತಿಶ್ರೀ ನಾಯ್ಕ ಹಾಗೂ ಉಪ ನಿರೀಕ್ಷಕ ಉದಯ ಸಿರ್ಸಿಕರ್ ಹಾಜರಿದ್ದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
